ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಸೆಪ್ಟೆಂಬರ್ 22, 2010

ಸೋಮವಾರ, ಸೆಪ್ಟೆಂಬರ್ 20, 2010

ವೀಕ್ಷಣೆ

ಸೂರ್ಯೋದಯಕ್ಕೂ ಮುಂಚೆಯೇ ಎಚ್ಚರಗೊಂಡಿದ್ದೆ.ಮಂಪರು ಕಣ್ಣಲ್ಲಿ ಹಾಗೆಯೇ ಸ್ವಲ್ಪ ಹೊತ್ತು ಮಲಗಿದೆ.ಯಾಕೋ ಮೊನ್ನೆಯ ಸಂಭವ ವಿಕಾಸಗಳಿಂದ ಮನ ನೊಂದಿತ್ತು.ಇಷ್ಟರವರೆಗೆ ನನ್ನ ಮನಸ್ಸಿನಲ್ಲಿ ತೋಚಿದ್ದೇ ಸರಿಯೆಂದು ಕೊಂಡಿದ್ದೆ.
ಆದರೆ ಹಾಗಲ್ಲ! ನಿಜವಾಗಿ ನಡೆಯೋದೇ ಬೇರೆ.ಇಲ್ಲದಿದ್ದರೆ ನನ್ನಾಕೆಯಿಂದ ಇಂಥಹ ಪ್ರಭುದ್ದ ಮಾತುಗಳು,ನನ್ನಲ್ಲಿ ಪರಿಣಾಮ ಬೀರಿದೆಯೆಂದರೆ ಅದರಲ್ಲಿ ಏನೋ ಸತ್ಯಾಂಶವಿರಬೇಕು.
ಮದುವೆಯಾದಂದಿನಿಂದ ಇಂದಿನವರೆಗೆ ನನ್ನಲ್ಲಿ ಯಾರ ಬಗ್ಗೆಯೂ ಒಂದಕ್ಷರ ಮಾತಾಡದವಳು,ದಿಡೀರನೆ ಫಿರ್ಯಾದಿಯ ಸುರಿಮಳೆಗೆರೆದಾಗ,ನನ್ನಲ್ಲಿ ನನ್ನ ಬಗ್ಗೆ ಇದ್ದಂತಹ ನಂಬಿಕೆ ಮುರಿದುಬಿತ್ತು.

ಬುಧವಾರ, ಸೆಪ್ಟೆಂಬರ್ 15, 2010

ಭ್ರಮೆ

kannadablog.ning.com

ಕಪ್ಪನೆಯ
ಕಾಡಿನಲಿ
ಕೀಟದ
ಕೀಟಲೆಯ
ಕುರುಡಾಗಿಸುವ
ಕೂಗನ್ನು
ಕೊಂಬೆಯ ಮೇಲಿರುವ
ಕೋಗಿಲೆಯು ನೋಡಿ
ಕೌತುಕದಿಂದ
ಕಂಬನಿಗೆರೆದಿತ್ತು